- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಏನಿದು “ತೌಕ್ತೆ”..? ಏನಾಗಲಿದೆ ಗೊತ್ತಾ...? ಇಲ್ಲಿದೆ ವಿವರ

ಏನಿದು “ತೌಕ್ತೆ”..? ಏನಾಗಲಿದೆ ಗೊತ್ತಾ…? ಇಲ್ಲಿದೆ ವಿವರ

ತೌಕ್ತೆ” ಚಂಡಮಾರುತ ಇದನ್ನು ತೌ’ತೆ ಎಂದು ಕರೆಯಲಾಗುತ್ತಿದ್ದು, ಆರು ಗಂಟೆಗಳಲ್ಲಿ ಪ್ರತಿ ಗಂಟೆಗೆ ಸುಮಾರು 11 ಕಿ.ಮೀ. ವೇಗದಲ್ಲಿ ಬೀಸಿ ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಹೊಂದಿಕೊಂಡಿರುವ ಪೂರ್ವ ಕೇಂದ್ರ ಭಾಗದಿಂದ ಹಾದು ಉತ್ತರ – ವಾಯುವ್ಯಭಿಮುಖವಾಗಿ ಹಾದು ಮೇ 15, 2021ರಂದು ಬೆಳಗ್ಗೆ 8.30ಕ್ಕೆ ಕೇಂದ್ರೀಕೃತವಾಗಿದ್ದು, ಆ ಪ್ರದೇಶ ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಹೊಂದಿಕೊಂಡಿರುವ ಅಕ್ಷಾಂಶ ಉತ್ತರಕ್ಕೆ 12.8 ಲಿ ಮತ್ತು ರೇಖಾಂಶ ಪರ್ವಕ್ಕೆ 72.5ಲಿ ದೂರದಲ್ಲಿ, ಉತ್ತರ–ವಾಯವ್ಯ ಅಮಿನಿದಿವಿಯ ಸುಮಾರು 190 ಕಿ.ಮೀ. ದೂರದಲ್ಲಿ, ದಕ್ಷಿಣ-ನೈಋತ್ಯ ಪಣಜಿಂ-ಗೋವಾದ 330 ಕಿ.ಮೀ.ದೂರದಲ್ಲಿ, ದಕ್ಷಿಣ-ಆಗ್ನೇಯ ಭಾಗದ ವೇರವಲ್ (ಗುಜರಾತ್) ನಿಂದ 930 ಕಿ.ಮೀ. ಮತ್ತು ದಕ್ಷಿಣ-ಆಗ್ನೇಯಕ್ಕೆ ಕರಾಚಿ (ಪಾಕಿಸ್ತಾನ) 1020 ಕಿ.ಮೀ. ದೂರದಲ್ಲಿದೆ.

ಚಂಡಮಾರುತ ಮುಂದಿನ ಆರು ಗಂಟೆಯಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಮತ್ತು ಆನಂತರದ 12 ಗಂಟೆಗಳಲ್ಲಿ ಚಂಡಮಾರುತ ಮತ್ತಷ್ಟು ಗಂಭೀರವಾಗಲಿದೆ. ಚಂಡಮಾರುತ ಮೇ 18ರ ಮಧ್ಯಾಹ್ನ-ಸಂಜೆಯ ವೇಳೆಗೆ ಉತ್ತರ-ವಾಯವ್ಯದತ್ತ ಸಾಗಿ ಗುಜರಾತ್ ನ ಕರಾವಳಿಯ ಪೋರಬಂದರ್ ಮತ್ತು ನಲಿಯಾ ಸುತ್ತಮುತ್ತ ಅಪ್ಪಳಿಸಲಿದೆ.

ಮುನ್ನೆಚ್ಚರಿಕೆಗಳು :

ಲಕ್ಷದ್ವೀಪ: ಮೇ 15ರಂದು ದ್ವೀಪದ ಉತ್ತರ ಭಾಗದ ಒಳನಾಡು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಮತ್ತು ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರಿ ಮಳೆಯಾಗಿದೆ ಮತ್ತು ಮೇ 16ರಂದು ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.

ಕೇರಳ: ಮೇ 15ರಂದು ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಮತ್ತು ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಿದೆ. ಮೇ 16ರಂದು ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ ಮತ್ತು ಮೇ 17ರಂದು ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.

ತಮಿಳುನಾಡು (ಘಟ್ಟ ಜಿಲ್ಲೆಗಳು): ಮೇ 15ರಂದು ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಭಾರೀ ಮಳೆಯಾಗಲಿದೆ ಮತ್ತು ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.

ಕರ್ನಾಟಕ (ಕರಾವಳಿ ಮತ್ತು ಘಟ್ಟ ಜಿಲ್ಲೆಗಳಿಗೆ ಹೊಂದಿಕೊಂಡ ಪ್ರದೇಶ): ಮೇ 15ರಂದು ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾದರೆ, ಇನ್ನು ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಮತ್ತು ಮೇ 16ರಂದು ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ.

ಕೊಂಕಣ ಮತ್ತು ಗೋವಾ: ದಕ್ಷಿಣ ಕೊಂಕಣ ಮತ್ತು ಗೋವಾದ ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ ಮತ್ತು ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಮೇ 15ರಂದು ಉತ್ತರ ಕೊಂಕಣದ ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ ಬಿದ್ದಿದೆ ಹಾಗೂ ಕೊಂಕಣ ಮತ್ತು ಗೋವಾ ಹಾಗೂ ಅದಕ್ಕೆ ಹೊಂದಿಕೊಂಡಿರುವ ಘಟ್ಟ ಪ್ರದೇಶಗಳಲ್ಲಿ ಮೇ 16ರಂದು ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಿದ್ದು, ಮೇ 17ರಂದು ಉತ್ತರ ಕೊಂಕಣದ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.

ಗುಜರಾತ್: ಮೇ 16ರಂದು ಮಧ್ಯಾಹ್ನದ ನಂತರ ಸೌರಾಷ್ಟ್ರ ಭಾಗದ ಕರಾವಳಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆರಂಭವಾಗುವ ಸಾಧ್ಯತೆ ಇದೆ. ಸೌರಾಷ್ಟ್ರ ಮತ್ತು ಕಚ್ ನ ಒಳನಾಡು ಪ್ರದೇಶದ ಹಲವೆಡೆ ಅಧಿಕದಿಂದ ಕೂಡಿದ ಭಾರೀ ಮಳೆ ಸಾಧ್ಯತೆ ಇದೆ. ಮೇ 17ರಂದು ಒಳನಾಡು ಪ್ರದೇಶಗಳಲ್ಲಿ (ಜುನಗಢ್ ಮತ್ತು ಗಿರ್ ಸೋಮನಾಥ ಜಿಲ್ಲೆಗಳು) ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಹಾಗೂ ಮೇ 18ರಂದು ಸೌರಾಷ್ಟ್ರ ಮತ್ತು ಕಚ್ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಒಳನಾಡು ಪ್ರದೇಶಗಳಲ್ಲಿ(ಪೋರಬಂದರ್, ದೇವಭೂಮಿ ದ್ವಾರಕ, ಜಾಮ್ ನಗರ್ ಮತ್ತು ಕಚ್ ಜಿಲ್ಲೆಗಳು) ಭಾರೀ ಮಳೆ(20 ಸೆಂಟಿ ಮೀಟರ್ ಗೂ ಅಧಿಕ) ಬೀಳುವ ನಿರೀಕ್ಷೆ ಇದೆ.

ಪಶ್ಚಿಮ ರಾಜಸ್ಥಾನ: ಮೇ 18 ಮತ್ತು 19ರಂದು ಹಲವು ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ ಮತ್ತು ಕೆಲ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.

ಸಮುದ್ರ ಸ್ಥಿತಿಗತಿ : ಮುಂದಿನ ಆರು ಗಂಟೆಗಳ ಕಾಲ ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶ ಹಾಗೂ ಲಕ್ಷದ್ವೀಪ – ಮಾಲ್ಡವೀಸ್ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸಮುದ್ರ ಸ್ಥಿತಿಗತಿ ತುಂಬಾ ಒರಟಾಗಿರಲಿದೆ.

ಮೇ 15ರಂದು ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಭಾಗದಲ್ಲಿ ಸಮುದ್ರದ ಸ್ಥಿತಿಗತಿ ಗಂಭೀರವಾಗಿರಲಿದೆ ಹಾಗೂ ಮೇ 16ರಂದು ಗಂಭೀರದಿಂದ ಸಾಧಾರಣವಾಗಿ ಕೂಡಿರಲಿದೆ ಮತ್ತು ಮೇ 17 ಮತ್ತು 18ರಂದು ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಗಂಭೀರವಾಗಿರಲಿದೆ.

ಮೇ 15ರಂದು ಕೇರಳದ ಕರಾವಳಿ ಉದ್ದಕ್ಕೂ ಮತ್ತು ಕೊಮೊರಿನ್ ಪ್ರದೇಶದಲ್ಲಿ ಸಮುದ್ರದ ಸ್ಥಿತಿಗತಿ ಒರಟಿನಿಂದ ತುಂಬಾ ಗಂಭೀರವಾಗಿರಲಿದೆ. ಅಂತೆಯೇ ಮೇ 15ರಂದು ಕರ್ನಾಟಕದ ಕರಾವಳಿ ಉದ್ದಕ್ಕೂ ಹಾಗೂ ಅರಬ್ಬೀ ಸಮುದ್ರದ ಪೂರ್ವ‍್ವ ಕೇಂದ್ರ ಭಾಗದಲ್ಲಿ ಸಮುದ್ರದ ಸ್ಥಿತಿ ಒರಟಿನಿಂದ ಕೂಡಿ ಗಂಭೀರವಾಗಿರಲಿದೆ. ಮಹಾರಾಷ್ಟ್ರ, ಗೋವಾ ಕರಾವಳಿ ಭಾಗದಲ್ಲೂ ಮೇ 15 ಮತ್ತು 16ರಂದು ಸಮುದ್ರದ ಸ್ಥಿತಿಗತಿ ಗಂಭೀರವಾಗಿರಲಿದೆ. ಮೇ 17ರಂದು ಬೆಳಗ್ಗೆ ದಕ್ಷಿಣ ಗುಜರಾತ್ ನ ಕರಾವಳಿ ಮತ್ತು ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಸಮುದ್ರದ ಸ್ಥಿತಿ ತುಂಬಾ ಒರಟಿನಿಂದ ಕೂಡಿದಂತೆ ಗಂಭೀರವಾಗಿರಲಿದೆ ಹಾಗೂ ಮೇ 18ರಂದು ಬೆಳಗ್ಗೆ ಗಂಭೀರದಿಂದ ಅಸಾಧಾರಣದಿಂದ ಕೂಡಿರಲಿದೆ.

ಬಿರುಗಾಳಿ ಹೆಚ್ಚಳ : ಸಮುದ್ರದಲ್ಲಿ ಅಲೆಗಳ ಎತ್ತರ 2 ರಿಂದ 3 ಮೀಟರ್ ಮೇಲೇರುವುದರಿಂದ ಮರ‍್ಬಿ, ಕಚ್, ದೇವಭೂಮಿ ದ್ವಾರಕ ಮತ್ತು ಜಾಮ್ ನಗರ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಮುಳುಗಡೆಯಾಗುವ ಸಾಧ್ಯತೆಗಳಿವೆ ಮತ್ತು ಪೋರಬಂದರ್, ಜುನಗಢ, ಗಿರ್ ಸೋಮನಾಥ್, ಅಮ್ರೇಲಿ, ಭವನಗರ್ ಗಳಲ್ಲಿ ಅಲೆ 1-2 ಮೀಟರ್ ಹಾಗೂ ಗುಜರಾತ್ ನ ಉಳಿದ ಕರಾವಳಿ ಜಿಲ್ಲೆಗಳಲ್ಲಿ ಅಲೆಗಳು 0.5ನಿಂದ 1 ಮೀಟರ್ ಎತ್ತರಕ್ಕೆ ಏರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!