- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಏಕಾಏಕಿ ಹೆಚ್ಚಳವಾದ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದ ಒಳ ಹರಿವು

ಏಕಾಏಕಿ ಹೆಚ್ಚಳವಾದ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದ ಒಳ ಹರಿವು

ವಿಜಯಪುರ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದ ಒಳ ಹರಿವು ಏಕಾಏಕಿ ಹೆಚ್ಚಾಗಿದೆ. ಗುರುವಾರ ರಾತ್ರಿಯವರೆಗೆ 13784 ಕ್ಯೂಸೆಕ್ ಒಳ ಹರಿವು ಇದ್ದು, ಇಂದು ಬೆಳಗ್ಗೆಯವರೆಗೆ 76.666 ಕ್ಯೂಸೆಕ್ ನೀರು  ಒಳಹರಿವು ಹೆಚ್ಚಳವಾಗಿದೆ. 

ಕಳೆದ ವರ್ಷ ಈ ಸಮಯದಲ್ಲಿ 9910 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇತ್ತು. ಇಂದು ಸಂಜೆ ವೇಳೆಗೆ ಒಳಹರಿವು ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ.  ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರದ ಕೊಯ್ನಾ ಜಲಾಶಯ ದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವ ಕಾರಣ ಇಂದು ಸಂಜೆ 7 ಗಂಟೆ ವೇಳೆಗೆ 1ಲಕ್ಷ  ಕ್ಯೂಸೆಕ್ ನೀರಿನ ಒಳ ಹರಿವು ಹೆಚ್ಚಾಗಬಹುದು ಎಂದು ಕೆಬಿಜೆಎನ್ ಎಲ್ ಮೂಲಗಳು ತಿಳಿಸಿವೆ.

ಸದ್ಯ ಹೊರಹರಿವು ಇಲ್ಲದ ಕಾರಣ ನೀರಿನ ಸಂಗ್ರಹ ಮತ್ತಷ್ಟು ಹೆಚ್ಚಾಗಿದೆ. ಜಲಾಶಯದ ಒಟ್ಟು ಸಾಮರ್ಥ್ಯ 519.60ಮೀಟರ ಇದ್ದು ಇಂದು ಬೆಳಗ್ಗೆ ಯವರೆಗೆ 509.60 ಮೀಟರ ಸಂಗ್ರಹವಾಗಿದೆ. ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ಭಾಗದಲ್ಲಿ ಕೊಯ್ನಾ ಜಲಾಶಯ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿಯವರೆಗೆ  ಅತಿ ಹೆಚ್ಚು 251ಮೀ.ಮೀ, ಮಹಾಬಲೇಶ್ವರದಲ್ಲಿ 198 ಮೀ.ಮೀ, ಕೊಲಂವಾಡಿ ಭಾಗದಲ್ಲಿ 200ಮೀ.ಮೀ, ಪಟ್ಟೇಗಾಂವದಲ್ಲಿ  207ಮೀಲಿ ಮೀಟರ್ ನಷ್ಟು ಮಳೆಯಾದ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಾಗಿದೆ.

ಇಂದು ಸಹ ಮಹಾ ರಾಷ್ಟ್ರ ಭಾಗದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳು ಇವೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!