- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಎಂ.ಅರ್.ಎನ್. ಫೌಂಡೇಶನ್‌ನಿಂದ ಉಚಿತ ಸೊಡಿಯಂ ಹೈಪೋ ಕ್ಲೋರೈಡ್. ಸಚಿವ ಮುರಗೇಶ ನಿರಾಣಿ

ಎಂ.ಅರ್.ಎನ್. ಫೌಂಡೇಶನ್‌ನಿಂದ ಉಚಿತ ಸೊಡಿಯಂ ಹೈಪೋ ಕ್ಲೋರೈಡ್. ಸಚಿವ ಮುರಗೇಶ ನಿರಾಣಿ

ಬಾಗಲಕೋಟ : ಕೊರೊನಾ ಸೊಂಕು ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಹರುಡುತ್ತಿದ್ದು, ಸ್ವಚ್ಚತೆ ನಮ್ಮ ಮೊದಲ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯತಿಗೆ ಸೊಡಿಯಂ ಹೈಪೋ ಕ್ಲೋರೈಡ್ ದ್ರಾವಣವನ್ನು ಉಚಿತ ವಿತರಿಸಲು ನಿರ್ಧರಿಸಲಾಗಿದೆ ಎಂದು ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ ನಿರಾಣಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಸೊಡಿಯಂ ಹೈಪೊಕ್ಲೋರೈಡ್ ಇದು ಸೊಂಕು ನಿವಾರಕ ದ್ರಾವಣವಾಗಿದ್ದು, ಕೊರೊನಾ ಸಮುದಾಯ ಹರಡುವಿಕೆಯನ್ನು ತಪ್ಪಿಸಲು ಸ್ವಚ್ಚತೆಗೆ ಆದ್ಯತೆ ನೀಡಬೇಕು, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಸಂತೆ ಕಟ್ಟೆಗಳು ಇಲ್ಲ ಕಡೆಯು ಸ್ಯಾನಿಟೈಸ್ ಮಾಡುವುದು ಅಗತ್ಯವಾಗಿದೆ. ಈ ಕಾರಣದಿಂದ ನಿರಾಣಿ ಫೌಂಡೇಶನ್ ವತಿಯಿಂದ ಪ್ರತಿ ಪಟ್ಟಣ ಹಾಗೂ ಗ್ರಾಮ ಪಂಚಾಯತಿಗೆ ಸೊಡಿಯಂ ಹೈಪೋ ಕ್ಲೋರೈಡ್ ದ್ರಾವಣವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಈ ಸೌಲಭ್ಯವನ್ನು ಪಡೆದುಕೊಳ್ಳುವವರು ಮುಧೋಳದ ನಿರಾಣಿ ಶುಗರ್ಸ್ ಆವರಣದಲ್ಲಿರುವ ನಿರಾಣಿ ಫೌಂಡೇಶನ್ ಕಚೇರಿಗೆ ಭೇಟ್ಟಿ ನೀಡಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಪೌಂಡೇಶನ್ ಸಿಬ್ಬಂದಿಗಳಾದ ಗಿರೀಶ ಆನಿಖಿಂಡಿ ಹಾಗೂ ಬಸವರಾಜ ಮಾಸಗತ್ತಿ ಅವರನ್ನು ಸಂಪರ್ಕಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!