- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಉತ್ತಮ ಸೇವೆಗೈದ ಡಾ.ಕಟ್ಟಿಯವರಿಗೆ ಗೌರವಯುತ ಬಿಳ್ಕೋಡುಗೆ

ಉತ್ತಮ ಸೇವೆಗೈದ ಡಾ.ಕಟ್ಟಿಯವರಿಗೆ ಗೌರವಯುತ ಬಿಳ್ಕೋಡುಗೆ

ವಿಜಯಪುರ : ಸರಳ ಸಜ್ಜನಿಕೆಯ ಅಧಿಕಾರಿಯಾಗಿ ಡಾ. ಶರಣಪ್ಪ ಕಟ್ಟಿ ಯವರು ಸಾರ್ವಜನಿಕರಿಗೆ ಉತ್ತಮ ಸೇವೆ  ಸಲ್ಲಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ಎಂದು ನೂತನ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಡಾ.ಎಸ್. ಎಲ್. ಲಕ್ಕಣ್ಣವರ ಅವರು ಹೆಳಿದರು.

ನಗರದ ಜಿಲ್ಲಾ ಆಸ್ಪತ್ರೆಯ ಸಾಮಾನ್ಯ ನರ್ಸಿಂಗ್ ಶಾಲೆಯ ಸಭಾಂಗಣದಲ್ಲಿ, ಜಿಲ್ಲಾ ಆಸ್ಪತ್ರೆ ನೌಕರರ ಕ್ಷೇಮಾಭಿವೃದ್ದಿ ಸಂಘ, ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘ, ಆರೋಗ್ಯ ಇಲಾಖೆಯ ಎಸ್.ಸಿ / ಎಸ್.ಟಿ ಸಂಘ, ಬಿ.ಎಸ್.ಸಿ ನರ್ಸಿಂಗ್ ಕಾಲೇಜ್ ಜಿ.ಎನ್.ಎಮ್ ಶಾಲೆ ಹಾಗೂ “ಡ  ವರ್ಗದ ನೌಕರರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಶರಣಪ್ಪ ಕಟ್ಟಿ ಇವರ ವಯೋ ನೊವೃತ್ತಿ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಲಕ್ಕಣ್ಣವರ ಮಾತನಾಡಿ, ಡಾ. ಕಟ್ಟಿ ಅವರಿಗೆ ವಯಕ್ತಿಕ ಜೀವನದಲ್ಲಿ ಕೆಲವು ದುರ್ಘಟನೆಗಳು ಸಂಭವಿಸಿದರೂ ಕೂಡಾ ಎದೆ ಗುಂದದೆ ಜಿಲ್ಲಾ ಆಸ್ಪತ್ರೆಗೆ ಅತ್ಯುತ್ತಮ ಸೇವೆ ನೀಡಿರುವದು ಸ್ಮರಣೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಡಿ.ಹೆಚ್.ಓ ಡಾ. ರಾಜಕುಮಾರ  ಯರಗಲ್,  ಕೋವಿಡ್ ಸಂದರ್ಭದಲ್ಲಿ ಡಾ.ಕಟ್ಟಿ ಅವರು ರೋಗಿಗಳ ಸಂಖ್ಯೆ ಹೆಚ್ಚಾದರೂ ಸುಸಜ್ಜಿತವಾದ ಸೇವೆ ನೀಡುವಲ್ಲಿ ಆಸ್ಪತ್ರೆಯ ವೈದ್ಯರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ ಹಾಗೂ ಬೆಂಬಲ ತುಂಬಿದರು. ಸರಳ ವ್ಯಕ್ತಿತ್ವದೊಂದಿಗೆ ದಿನದ 24 ಗಂಟೆ ಯಾರೇ ದೂರವಾಣಿ ಕರೆ ಮಾಡಿದರು ಅವರಿಗೆ ಸ್ಪಂದಿಸುವ ಕಾರ್ಯ ಮಾಡಿದರು ಎಂದು ಹೆಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕಟ್ಟಿ ಅವರು ನನ್ನ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ನನಗೆ ಅತ್ಯುತ್ತಮ ಬೆಂಬಲ ನೀಡಿದ್ದರು. ಅವರು ನೀಡಿದ ಪ್ರೀತಿ ಬೆಂಬಲ ನನ್ನ ಜೀವನದಲ್ಲಿ ಮರೆಯಲಾಗದು ನನ್ನ ನೋವು ನಲಿವುಗಳಿಗೆ ಸ್ಪಂದಿಸಿ ನನಗೆ ಆತ್ಮ ಸ್ಥೈರ್ಯ ತುಂಬಿದರು. ಎಲ್ಲರಿಗೂ ನಾನು ಚಿರಋಣಿ ಎಂದು ಕೃತಜ್ಞತೆ ಸಲ್ಲಿಸಿದರು.

ವಿಜಯಪುರದ ಸಂಗೀತ ಮಹಲ್.  ಜಗತ್ತಿನಲ್ಲಿಯೇ ಮೊದಲ ಕೊಡುಗೆ ನೀಡಿದ ಆದಿಲ್ ಷಾ

ಇದೆ ಸಂದರ್ಭದಲ್ಲಿ ಡಾ.ಧರ್ಮರಾಯ. ಇಂಗಳೆ ರವರಿಗೆ ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಡಾ.ಮಲ್ಲನಗೌಡ. ಬಿರಾದಾರ, ಡಾ.ಕವಿತಾ. ದೊಡಮನಿ, ಡಾ.ಅಶೋಕ. ಜಾಧವ, ಡಾ.ಪ್ರಭು, ಆಸ್ಪತ್ರೆಯ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಡಾ.ಪರಶುರಾಮ. ದೇವಮಾನೆ, ಡಾ.ಎ. ಜಿ. ಬಿರಾದಾರ, ರಜಿಯಾ. ಪಿಂಜಾರ ಉಪಸ್ಥತರಿದ್ದರು.

ಸಮಾರಂಭದಲ್ಲಿ ಡಾ.ಶಶಿಕಲಾ. ಹಿರೆಮನಿ, ಡಾ.ಆನಂದ. ಝಳಕಿ, ಡಾ.ಮಹೇಶ. ಮೋರೆ, ಪ್ರದೀಪ. ಕ್ಯಾತನ, ಮತಿ. ಗೀತಾ. ತೊರವಿ, ಸುರೇಂದ್ರ. ಮಾನಕರ, ವಸುಧೇಂದ್ರ. ಹೆಚ್, ದಾಕ್ಷಾಯಣಿ. ಪಾಟಿಲ, ಭಾರತಿ. ಮೊಕಾಶಿ, ಪ್ರಶಾಂತ. ಸೋಮಣ್ಣವರ, ಅನೀಲ. ಘೋರ್ಪಡೆ, ಸಂತೋಷ. ಬಿರಾದಾರ ಹಾಗೂ ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ನೂತನ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಎಸ್. ಎಲ್. ಲಕ್ಕಣ್ಣವರ ಇವರಿಗೆ ಸ್ವಾಗತಿಸಲಾಯಿತು.

ಜಿಲ್ಲಾ ಆಸ್ಪತ್ರೆಯ ನೌಕರರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ  ರವಿ. ಕಿತ್ತೂರ ನಿರೂಪಿಸಿ ವಂದಿಸಿದರು. ಲಾಲಸಾಬ ಬಾಗಲಕೋಟ ಶುಶ್ರೂಷಾ ಅಧಿಕಾರಿ ಇವರು ಸ್ವಾಗತಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!