- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಇಲ್ಲ ಎನ್ನಬೇಡಿ, ಲಸಿಕೆ ನೀಡಿ ಜನರ ಪ್ರಾಣ ರಕ್ಷಿಸಿ. ಶಂಕರಗೌಡ ಬಿರಾದಾರ ಮನವಿ

ಇಲ್ಲ ಎನ್ನಬೇಡಿ, ಲಸಿಕೆ ನೀಡಿ ಜನರ ಪ್ರಾಣ ರಕ್ಷಿಸಿ. ಶಂಕರಗೌಡ ಬಿರಾದಾರ ಮನವಿ

ಬಸವನಬಾಗೇವಾಡಿ : ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳ ಜನತೆಗೆ ಕೋವಿಡ್ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಓತಗೇರಿ ಅವರಿಗೆ ಇಂದು ಮಂಗಳವಾರ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ಪದಾಧಿಕಾರಿಗಳಿಂದ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಆರೋಗ್ಯಾಧಿಕಾರಿ ಓತಗೇರಿ ಅವರಿಗೆ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ಪದಾಧಿಕಾರಿಗಳಿಂದ ಮನವಿ

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ್ ಮಾತನಾಡಿ, ಸಾರ್ವಜನಿಕರಿಗೆ ಕೋವಿಡ ಲಸಿಕೆಯನ್ನು ಬಸವನಬಾಗೇವಾಡಿ ಪಟ್ಟಣದಲ್ಲಿ ಕಳೆದ ಹದಿನೈದು ದಿನಗಳಿಂದ ಸಾರ್ವಜನಿಕರಿಗೆ ಕೊವಿಡ ಲಸಿಕೆಯನ್ನು ಕೊಡುವುದನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕರು ಲಸಿಕಾ ಕೇಂದ್ರಕ್ಕೆ ಹೋದರೆ ಅಲ್ಲಿಯ ಸಿಬ್ಬಂದಿ ಮುಂದಿನ ವಾರ ಬನ್ನಿ ಈವಾಗ ಲಸಿಕೆ ಇಲ್ಲ ಅಂತ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕ್ರಾಂತಿ ಕೇಸರಿ ಗಂಗಾಧರೇಶ್ವರರು ಮತ್ತು ಹಂಡೆ ವಜೀರ ಸೈನಿಕರು

ಬಸವನಬಾಗೇವಾಡಿ ಪಟ್ಟಣದಲ್ಲಿ  ಸುಮಾರು ನಲವತ್ತು ಸಾವಿರ ಜನಸಂಖ್ಯೆ ಜನರು ವಾಸಿಸುತ್ತಿದ್ದು, ಆದ್ಯತೆ ಮೇರೆಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿ ಸಾರ್ವಜನಿಕರ ಪ್ರಾಣವನ್ನು ರಕ್ಷಿಸಬೇಕೆಂದು ಹಾಗೂ ಲಸಿಕಾ ಕೇಂದ್ರಗಳನ್ನು ಪಟ್ಟಣದಲ್ಲಿ ಇನ್ನೊಂದು ಪ್ರಾರಂಭಿಸಬೆಕು ಮನವಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ  ರಾಷ್ಟ್ರೀಯ ಬಸವ ಸೈನ್ಯದ ತಾಲ್ಲೂಕು ಅಧ್ಯಕ್ಷರಾದ ಸಂಜು ಬಿರಾದಾರ, ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ಗುರುರಾಜ್ ವಂದಾಲ, ವಿರೇಶ್ ಗಬ್ಬೂರ್, ಮಹಾಂತೇಶ ಹಾರಿವಾಳ, ವಿಜಯ್ ರಗಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!