- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಆರೋಗ್ಯ ಸಹಾಯಕಿಯರ ವೇತನ ಬಿಡುಗಡೆಗೆ ಆಗ್ರಹ

ಆರೋಗ್ಯ ಸಹಾಯಕಿಯರ ವೇತನ ಬಿಡುಗಡೆಗೆ ಆಗ್ರಹ

ಬಸವನಬಾಗೇವಾಡಿ : ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ವೇತನ ಬಿಡುಗಡೆ ಹಾಗೂ ವೇತನ ವಿಳಂಬವನ್ನು ಸರಿಪಡಿಸುವಂತೆ ಆಗ್ರಹಿಸಿ ತಾಲೂಕಾ ಆರೋಗ್ಯ, ಉಪ, ಪ್ರಾಥಮಿಕ ಕೇಂದ್ರಗಳ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಸೋಮವಾರ ತಹಶೀಲ್ದಾರ ಎಂ.ಎನ್. ಬಳಿಗಾರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಂ.ಬಿ. ಬೇವನೂರ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾಗಿ ಹಗಲಿರುಳು ಎನ್ನದೇ ಕಾರ್ಯ ನಿರ್ವಹಿಸುತ್ತಿರುವ ನಮಗೆ, ನಮ್ಮ ವೇತನ ಕೇಂದ್ರ ಪುರಸ್ಕೃತ ಯೋಜನೆಯ ಅಡಿಯಲ್ಲಿ ಬರುವ ಲೆಕ್ಕ ಶೀರ್ಷಿಕೆಯೆಡಿಯಲ್ಲಿ ಬರುವ ಸುಮಾರು ನಾಲ್ಕೈದು ತಿಂಗಳಗಳಿಂದ ಬಿಡುಗಡೆಯಾಗಿದೆ ಇದು ಏಳೇಂಟು ವರ್ಷಗಳಿಂದ ಹೀಗೆ ಮುಂದುವರಿಯುತ್ತ ಬರುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಪ್ರಸಕ್ತ ಸಂಕಷ್ಟದಲ್ಲಿ ಗರ್ಭಿಣಿ, ಬಾಣಂತಿಯರ ಆರೈಕೆದೊಂದಿಗೆ ಮಕ್ಕಳಿಗೆ ಸಕಾಲದಲ್ಲಿ ಚುಚ್ಚುಮದ್ದು ನೀಡುವದು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮಗಳನ್ನು ವಹಿಸಿ ಕಾರ್ಯನಿರ್ವಹಿಸುತ್ತೇದ್ದೇವೆ ಇತಂಹ ಸಂದಿಗ್ಧ ಪರಿಸ್ಥಿತಿಯಲ್ಲಿ 5ತಿಂಗಳ ವೇತನ ನೀಡದೇ ಇರುವುದು ಸೂಕ್ತವಲ್ಲ, ಒಂದು ವೇಳೆ ನಿಗಧಿಪಡಿಸಿದ ದಿನದ ಒಳಗಾಗಿ ವೇತನವನ್ನು ಬಿಡುಗಡೆಗೊಳಿಸದೇ ಹೋದರೆ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುತ್ತಾ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

 ಈ ಸಂದರ್ಭದಲ್ಲಿ ಶಿವಲಿಲಾ ಧನ್ಯಾಳ, ಸುಜಾತ ಕಿಶೋರಿ, ಅಣ್ಣಪ್ಪ ಬಿದ್ನಾಳ, ಚಂದ್ರಶೇಖರ ಹದಿಮೂರ, ಅಶ್ವೀನಿ ಮಂಬರಮಟ್ಟಿ, ರೂಪಾ ಬಡನೂರ, ಅಂಬಿಕಾ ಪತ್ತಾರ, ಶಾರದಾ ಗಿಡಜಾಡರ, ಮಲ್ಲಮ್ಮ ಹಳ್ಳೂರ, ನೀಲಮ್ಮ ನಿವಾಳಕೋಡಿ, ಎಸ್.ಆರ್.ಬಿರಾದಾರ, ಬೋರಮ್ಮ ಕಿಣಗಿ ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!