- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಆತ್ಮ ವಿಶ್ವಾಸದಿಂದ ಕೊರೋನಾ ಮುಕ್ತ ಸಾಧ್ಯ

ಆತ್ಮ ವಿಶ್ವಾಸದಿಂದ ಕೊರೋನಾ ಮುಕ್ತ ಸಾಧ್ಯ

ಬಸವನಬಾಗೇವಾಡಿ : ಕೊರೋನಾ ವೈರಸ್‌ನ್ನು ಭಯದಿಂದ ಮುಕ್ತಿಗೊಳಿಸಲು ಸಾಧ್ಯವಿಲ್ಲ ಬದಲಾಗಿ ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ನಿಯಂತ್ರಿಸಬಹುದು ಎಂದು ಸಂಘದ ತಾಲೂಕಾ ಕಾರ್ಯವಾಹ, ಜಿಲ್ಲಾ ಧಾರ್ಮಿಕ ಪರಿಷತ್ ನಾಮನಿರ್ದೇಶಿತ ಸದಸ್ಯ ಆಯುರ್ವೇದಿಕ ಆಸ್ಪತ್ರೆ ವೈದ್ಯ ಡಾ. ಬಸವರಾಜ ಚವ್ಹಾಣ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ಪಟ್ಟಣದ ಏಳು ಸ್ಥಳಗಳಲ್ಲಿ ಕೊಲ್ಹಾಪುರದ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳು ತಯಾರಿಸಿದ ರೋಗ ನಿರೋಧಕ ಹೆಚ್ಚಿಸುವ ಆಯುರ್ವೇದಕ ಔಷಧಿಯನ್ನು ವಿತರಿಸಿ ಮಾತನಾಡಿದ ಅವರು, ಧೈರ್ಯ ಮತ್ತು ಆತ್ಮವಿಶ್ವಾಸ ಎಲ್ಲೆಡೆ ಸಿಗುವ ವಸ್ತುಗಳಲ್ಲ ಅವು ನಮ್ಮ ಮನಸ್ಸಿನಲ್ಲಿ ತಯಾರಾಗುತ್ತವೆ ಈ ನಿಟ್ಟಿನಲ್ಲಿ ನಾವು ಸೋಂಕಿಗೆ ಧೃತಿಗೆಡದೆ ಧೈರ್ಯ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಆಯುರ್ವೇದಿಕ ಔಷಧಿ ಸೇವಿಸಬೇಕು ಹಾಗೂ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದರೊಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸುಂದರ ಜೀವನ ನಡೆಸಬೇಕೆಂದು ಹೇಳಿದರು.

ಇದನ್ನೂ ಓದಿ…

ಈ ಸಂದರ್ಭದಲ್ಲಿ ಕಲಬುರ್ಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಂಗಮೇಶ ಪೂಜಾರಿ, ನ್ಯಾಯವಾದಿ ಗೋಪಾಲ ಚಿಂಚೋಳಿ ಮಾತನಾಡಿ ಕೋವಿಡ್ ಮಹಾಮಾರಿ ತಡೆಗಟ್ಟುವಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಫಲಕಾರಿಯಾಗಿರುವ ಕನ್ಹೇರಿ ಮಠದ ಇಮ್ಯುನ್ ಬೂಸ್ಟರ್ ಔಷಧಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೇ ವೈರಸ್‌ನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾರೇಶ ಹೊಸಮನಿ, ಎಂ.ಎಸ್.ಝಳಕಿ, ರಾಘವೇಂದ್ರ ಹಿಪ್ಪರಗಿ, ರಾಚಯ್ಯ ಗಣಕುಮಾರಮಠ, ಮಲ್ಲಿಕಾರ್ಜುನ ದೇವರಮನಿ, ಶ್ರೀಶೈಲ ಸಿರಗುಪ್ಪಿ, ನಾಗೇಶ ನಾಗೂರ, ಪರಶುರಾಮ ಕುರಾಡೆ, ಸುರೇಶ ಗುಂಡಿ, ವಿಶ್ವನಾಥ ನೇಗಿನಾಳ, ಆದಿತ್ಯ ಪವಾರ, ಶರಣು ವಾಲಿಕಾರ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!