- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಆಕಸ್ಮಿಕವಾಗಿ ಬಾಲಕನಿಗೆ ತಗುಲಿದ ಗುಂಡು. ವಿಜಯಪುರದ ಚಡಚಣದಲ್ಲಿ ಘಟನೆ

ಆಕಸ್ಮಿಕವಾಗಿ ಬಾಲಕನಿಗೆ ತಗುಲಿದ ಗುಂಡು. ವಿಜಯಪುರದ ಚಡಚಣದಲ್ಲಿ ಘಟನೆ

ವಿಜಯಪುರ : ಆಟವಾಡುವಾಗ ಆಕಸ್ಮಿಕವಾಗಿ ಬಾಲಕನಿಗೆ ಗುಂಡು ತಗುಲಿ ನಾಲ್ಕು ವರ್ಷದ ಬಾಲಕನ ತೊಡೆಯ ಹಿಂಭಾಗ ಗಾಯವಾದ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

ಚಡಚಣ ಪಟ್ಟಣದ ಮರಡಿ (ಮಡ್ಡಿ) ಪ್ರದೇಶದಲ್ಲಿ ಘಟನೆ ನಡೆದಿದ್ದು, ಲೋಡೆಡ್ ರಿವಾಲ್ವರ್ ಮನೆಯ ತಿಜೋರಿಯಲ್ಲಿಡಲಾಗಿತ್ತು. ಆಟವಾಡುವಾಗ ರಿವಾಲ್ವರ್ ಹೊರ ತೆಗೆದ ನಾಲ್ಕು ವರ್ಷದ ಅಭಿಷೇಕ ಸಿದ್ರಾಮ ಗೋಟ್ಯಾಳ, ಆಟವಾಡುವಾಗ ಆಕಸ್ಮಿಕವಾಗಿ ತೊಡೆಯ ಹಿಂಭಾಗ ಗುಂಡು ತಾಗಿದೆ.

ಪರವಾನಿಗೆ ಪಡೆದಿದ್ದ ರಿವಾಲ್ವಾರ್ ಇದಾಗಿದೆ. ಬುಲೆಟ್ ತಗುಲಿ ಪಾಸಾದ ಕಾರಣ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಲಕನಿಗೆ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರ ಮಡಿವಾಳರ, ಪಿ ಎಸ್ ಐ ಸತಿಗೌಡರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯು ಚಡಚಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!