- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಪ್ಪಾಸಾಹೇಬ ಪಟ್ಟಣಶೆಟ್ಟಿ ಜನ್ಮದಿನ. ಸಾಮಾಜಿಕ ಕಳಕಳಿ ಮೆರೆದ ಅಭಿಮಾನಿಗಳು

ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜನ್ಮದಿನ. ಸಾಮಾಜಿಕ ಕಳಕಳಿ ಮೆರೆದ ಅಭಿಮಾನಿಗಳು

ವಿಜಯಪುರ : ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ 52 ನೇ ಜನ್ಮ ದಿನದ ಅಂಗವಾಗಿ ಯುವ ಅಭಿಮಾನಿಗಳು ರಕ್ತಧಾನ ಮತ್ತು ಪೌರಕರ್ಮಿಕರಿಗೆ ಉಚಿತವಾಗಿ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದರು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗೋಪಾಲ ಘಟಕಾಂಬಳೆ ಹಾಗೂ ಮಾಜಿ ಬಿಡಿಎ ಅಧ್ಯಕ್ಷ ಭೀಮಾಶಂಕರ ಹದನೂರ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಸಡಗರ ಸಂಭ್ರಮದಿಂದ ಆಚರಣೆಯನ್ನು ಮಾಡುತ್ತಿದೆವು, ಆದರೆ ಕೊರೊನಾ ಮಹಾಮಾರಿಗೆ ಹಲವಾರು ಜನತೆ ಪ್ರಾಣ ಕಳೆದುಕೊಂಡು ಜಗತ್ತೇ ನಲುಗಿ ಹೋಗಿರುವ ಕಾರಣ ಈ ಬಾರಿ ಸರಳ ಹಾಗೂ ಅರ್ಥಪೂರ್ಣವಾಗಿ ಅಪ್ಪು ಪಟ್ಟಣಶೆಟ್ಟಿ ಅವರ ಹುಟ್ಟ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.

ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರ ಬೆಂಬಲಿಗರು ಮತ್ತು ಅಭಿಮಾನಿಗಳ ಇಂದು ರಕ್ತ ಧಾನ ಮಾಡುವ ಮೂಲಕ ರೋಗಿಗಳಿಗೆ ಸಹಾಯ ಮಾಡಲಾಯಿತು. ಅಲ್ಲದೇ  ಆಹಾರದ ಕಿಟ್ ವಿತರಣೆ ಮಾಡಿ ಬಡ ಜನತೆಗೆ ಸಹಾಯ ಮಾಡುವ ಮೂಲಕ ಅಭಿಮಾನ ಮೆರೆದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಆನಂದ ಧೂಮಾಲೆ, ಮುಖಂಡರುಗಳಾದ ಭರತ್ ಕೋಳಿ, ಮಳುಗೌಡ ಪಾಟೀಲ್, ಸತೀಶ ಪಾಟೀಲ್, ಬಾಬು ಜಗದಾಳೆ, ಗುರು ದೇಶಪಾಂಡೆ, ಆನಂದ ಮುಚಂಡಿ, ಸಚಿನ್ ಅಡಕಿ, ರಮೇಶ್ ದೇವಕರ, ಶಿವಾಜಿ ಪಾಟೀಲ್, ಜಗದೀಶ್ ಮುಚಂಡಿ, ರವಿ ಮುಕಾರ್ತಿಹಾಳ, ಅನಿಲ್ ಉಪ್ಪಾರ, ರಾಜೇಶ್ ಸೂರ್ಯವಂಶಿ, ಸಾಗರ ಅಡಕಿ, ಗಣೇಶ್ ಹಜೇರಿ,ಸತೀಶ್ ಪೀರ ನಾಯಕ, ಅಖಿಲ ಶೀಲವಂತ್, ಮಾರುತಿ ಮೊರೆ, ಸಂತೋಷ ಬುದಿಹಾಳ ಸೇರಿದಂತೆ ಇನ್ಈತರ ಮುಖಂಡರುಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!