- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅತ್ಯಾಚಾರ ಆರೋಪಿಗಳಿಗೆ ಶಿಕ್ಷೆಯಾಗಲಿ. ಅಂಜುಮನ್ ಎ-ಇಸ್ಲಾಂ ಕಮೀಟಿ ಆಗ್ರಹ

ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆಯಾಗಲಿ. ಅಂಜುಮನ್ ಎ-ಇಸ್ಲಾಂ ಕಮೀಟಿ ಆಗ್ರಹ

ಬಸವನಬಾಗೇವಾಡಿ : ಮೇ 14ರಂದು ನಡೆದ ದಲಿತ ಕುಟುಂಬದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗದ ಕೊಲೆಗೆ ಕಾರಣವಾದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಅಂಜುಮನ್ ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಎಂ. ಎಲ್. ಬಾವೂರ ಆಗ್ರಹಿಸಿದರು.

ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ಜಾಮೀಯಾ ಮಸೀದಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಗ್ರಾಮದಲ್ಲಿ ಇಂತಹ ಅಹಿತಕರ ಘಟನೆ ನಡೆಯಬಾರದಿತ್ತು, ಇದಕ್ಕೆ ಅಂಜುಮನ್– ಎ-ಇಸ್ಲಾಂ ಕಮೀಟಿ ತಿವ್ರವಾಗಿ ಖಂಡಿಸುತ್ತದೆ. ಈ ಹೀನ ಕೃತ್ಯದ ಹಿಂದೇ ಯಾರ ಕೈವಾಡವಿದ್ದರೂ ಸಹಿತ ಮುಲಾಜಿಲ್ಲದೆ ಶಿಕ್ಷೆಗೆ ಗುರಿಪಡಿಸಬೇಕು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ತಾಪಂ ಸದಸ್ಯ ಜಾಕೀರಹುಸೇನ ಶಿವಣಗಿ ಮಾತನಾಡಿ, ನಮ್ಮ ಗ್ರಾಮದ ದಲಿತ ಕುಟುಂಬದ ಮಕ್ಕಳಿಗಾದ ಅನ್ಯಾಯ ಬೇರೆ ಯಾವುದೇ ಮಕ್ಕಳಿಗೆ ಆಗಬಾರದು, ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಿ ಗಲ್ಲು ಶಿಕ್ಷೆಗೆ ಗುರಿ ಪಡಿಸಿ ಅನ್ಯಾಯವಾದ ದಲಿತ ಕುಂಟುಂಬಗಳಿಗೆ ಸೂಕ್ತ ನ್ಯಾಯವನ್ನು ಒದಗಿಸಬೇಕು ಎಂದು ಹೇಳಿದರು.

ಡಾ. ಇಬ್ರಾಹಿಂ ಮನಿಯಾರ, ಡಾ. ಕೆ.ಎಂ ಢವಳಗಿ, ಎಚ್.ಐ. ಮುಲ್ಲಾ, ಮಹಿಬೂಬ ನಧಾಪ್, ಕರವೇ ಎಂ.ಕೆ ಇನಾಮದಾರ, ಕಾರ್ಯಾಧ್ಯಕ್ಷ ಲಾಲಮಹ್ಮದ ಮುಲ್ಲಾ, ಅಂಜುಮನ್ ಕಮೀಟಿ ಉಪಾಧ್ಯಕ್ಷ ಬಂದೇನಮಾಜ ಕತ್ನಳ್ಳಿ, ಅಮೀರಮಜಾನ ಮಕಾಂದಾರ, ಅಬುಕರ್ ಮುಲ್ಲಾ , ನಬಿಲಾಲ ಅತ್ತಾರ, ಶಕೀಲ್ ಗುಡ್ನಾಳ, ಮಹ್ಮದರಫೀಕ್ ರಂಜಣಗಿ, ಅಬ್ದುಲ್‌ರಹೇಮಾನ ಗುಡ್ನಾಳ, ಮಹ್ಮದರಫೀಕ ಗೊಠೇದ ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!