- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅತ್ಯಾಚಾರಿಗಳನ್ನು ಗಲ್ಲಿಗೇರಿಸಿ. ದಸಂಸ ಮುಖಂಡರಿಂದ ಆಗ್ರಹ

ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ. ದಸಂಸ ಮುಖಂಡರಿಂದ ಆಗ್ರಹ

ಬಸವನಬಾಗೇವಾಡಿ : ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸುಗಿ ಕೊಲೆಗೈದಿರುವ ಘಟನೆಯನ್ನು ಖಂಡಿಸಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕುದರಿಸಾಲವಾಡಗಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರ ಮೂಲಕ ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಕಾರ್ಯಕರ್ತರು ಮನವಿ ಸಲ್ಲಸಿದರು.

ಡಿಎಸ್‌ಎಸ್ (ನಾಗವಾರ ಬಣ) ತಾಲೂಕು ಸಂಚಾಲಕ ಗುರುರಾಜ ಗುಡಿಮನಿ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅತ್ಯಾಚಾರ ಮಾಡಿ ಕೊಲೆಗೈದು ಕೈಕಾಲು ಕಟ್ಟಿ ಯಾಳವಾರ ಗ್ರಾಮದ ಹೊಲವೊಂದರಲ್ಲಿನ ಭಾವಿಗೆ ಎಸೆದಿರುವುದು ಹೀನಾಕೃತ್ಯವಾಗಿದೆ, ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ ಆಗಿದ್ದು, ಪದೇ ಪದೇ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕೊಲೆ ನಡೆಯುತ್ತಿರುವುದು ಜಿಲ್ಲೆಯಲ್ಲಿ 3ನೇ ಪ್ರಕರಣವಾಗಿದ್ದು ನಾಚಿಕೆಗೇಡಿತನದ ಸಂಗತಿ, ಈ ಪ್ರಕರಣದಲ್ಲಿ ಯಾರೇ ಇದ್ದರು ಅವರನ್ನು ಕೊಡಲೇ ಬಂಧಿಸಿ ಉಗ್ರವಾದ ಶಿಕ್ಷೆ ವಿಧಿಸಿ, ತನಿಖೆಯಲ್ಲಿ ವಿಳಂಬ ಹಾಗೂ ತಾರತ್ಯಮ ಕಂಡು ಬಂದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂತ್ರಸ್ತ ಕುಟುಂಬಗಳಿಗೆ ತಲಾ 50 ಲಕ್ಷ ಪರಿಹಾರ ನೀಡಬೇಕು, ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ನೀಡಬೇಕು, ಆದಿಜಾಂಬವ ನಿಗಮದಿಂದ ಭೂ ಒಡೆತನ ಯೋಜನೆ ಅಡಿಯಲ್ಲಿ ಎರಡು ಕುಟುಂಬಕ್ಕೆ 5 ಎಕರೆ ಜಮೀನು ಮಂಜೂರ ಮಾಡಬೇಕು, ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಿಕೂಡಬೇಕು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪರಿಹಾರ ಒದಗಿಸಬೇಕು, ಈ ಪ್ರಕರಣವನ್ನು ವಿಶೇಷ ಪ್ರಕರಣವೇಂದು ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕು ಪ್ರಮುಖವಾಗಿ, ನೂಂದ ಕುಟುಂಬದ ಮಕ್ಕಳ ಶಿಕ್ಷಣ ಮತ್ತು ಸರಕಾರಿ ಎಲ್ಲ ಸೌಲಭ್ಯ ರೀತಿಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಾಬಾಳ, ಕಾಮೇಶ ಭಜಂತ್ರಿ, ಪ್ರಶಾಂತ ಚಲವಾದಿ, ಮಡಿವಾಳಪ್ಪ ಕಳ್ಳಿಮನಿ, ಸುನೀಲ ನಡುವಿನಮನಿ, ಬಸಪ್ಪ ಡಂಬಳ, ಬಸವರಾಜ ಕಳ್ಳಿಮನಿ, ಅನೀಲ ಹಟ್ಟಿ, ಶಂಕ್ರೆಪ್ಪ ಮಾದರ ಮಲಕು ದೇವೂರ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!