- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಕ್ರಮ ಗಾಂಜಾ ವಶಪಡಿಸಿಕೊಂಡ ಪೊಲೀಸ್

ಅಕ್ರಮ ಗಾಂಜಾ ವಶಪಡಿಸಿಕೊಂಡ ಪೊಲೀಸ್

ಮುದ್ದೇಬಿಹಾಳ : ಅಕ್ರಮ ಗಾಂಜಾ ಬೆಳದಿದ್ದ ತೋಟದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ರೈತ ರಾಮನಗೌಡ ಹಣಮಂತ್ರಾಯಗೌಡ ಬಸರಕೋಡ ತೋಟದ ಬದುವಿನಲ್ಲಿ ಗಾಂಜಾ ಬೇಳೆಯಲಾಗಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಆದರಿಸಿ, ಪೊಲೀಸರು ಸ್ಥಳಕ್ಕೆ ಬಂದು ಸುಮಾರು 9 ಕೆಜಿ 800ಗ್ರಾಂ ಗಾಂಜಾ ಜಪ್ತಿಗೈದಿದ್ದಾರೆ. ಅಂದಾಜು ಒಂದು ಲಕ್ಷ ಮೌಲ್ಯದ ಗಾಂಜಾ ಇದಾಗಿದ್ದು, ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಈ ಕುರಿತಾಗಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣ ಪತ್ತೆ ಮಾಡುವಲ್ಲಿ ಯಶಶ್ವಿಯಾದ ಬಸವನ ಬಾಗೇವಾಡಿ ಡಿ.ವೈ.ಎಸ್.ಪಿ ಅರುಣಕುಮಾರ ಕೋಳೂರ, ಮುದ್ದೇಬಿಹಾಳ ಸಿ.ಪಿ.ಐ ಆನಂದ ವಾಘಮೋಡೆ, ಮುದ್ದೇಬಿಹಾಳ ಪಿಎಸ್‌ಐ ಎಮ್.ಬಿ ಬಿರಾದಾರ, ಸಿಬ್ಬಂದಿಗಳಾದ ಎಸ್.ಎಲ್ ಹತ್ತರಕಿಹಾಳ, ಎಸ್.ಬಿ ಬಿರಾದಾರ, ಎಚ್.ವೈ ಕೋಳಿ, ಎಸ್.ಬಿ ನಾಗರಡ್ಡಿ, ಎಸ್.ಎಸ್ ರಾಠೋಡ, ಎಸ್.ಬಿ.ಮ್ಯಾಗೇರಿ ರವರ ಕಾರ್ಯವನ್ನು ಜಿಲ್ಲಾಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!