- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಕ್ಕನಾಗಮ್ಮ ಮಹಿಳಾ ವಿವಿದೋದ್ದೇಶ ಸಂಘದಿಂದ ದಿನಸಿ ಕಿಟ್ ವಿತರಣೆ

ಅಕ್ಕನಾಗಮ್ಮ ಮಹಿಳಾ ವಿವಿದೋದ್ದೇಶ ಸಂಘದಿಂದ ದಿನಸಿ ಕಿಟ್ ವಿತರಣೆ

ಬಸವನಬಾಗೇವಾಡಿ : ಪಟ್ಟಣದ ಅಕ್ಕನಾಗಮ್ಮ ಮಹಿಳಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್ ವತಿಯಿಂದ ಕಡು ಬಡವರಿಗೆ ದಿನಸಿ ಕಿಟ್ ವಿತರಿಸಲಾಯಿತು.

ಕಿಟ್ ವಿತರಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷೆ ಡಾ.ಸುಮಾ ಕಲ್ಲೂರ, ಕೋವಿಡ್ ನಿಂದಾಗಿ ಸಾಕಷ್ಟು ಜನರು ತೊಂದರೆ ಅನುಭವಿಸಿದ್ದಾರೆ.  ಕೊರೊನಾ ಸೋಂಕು ಹರಡದಂತೆ ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಮುನ್ನೆಚ್ಚರಿಕೆ ವಹಿಸಬೇಕು.  ಲಾಕ್ ಡೌನ್ ಸಂದರ್ಭದಲ್ಲಿ ದುಡಿಮೆ ಇಲ್ಲದೇ ಸಾಕಷ್ಟು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅಂತಹವರನ್ನು ಗುರುತಿಸಿ ನೆರವು ನೀಡುವತ್ತ ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ಮುಂದಾಗಿವೆ. ಅದರಂತೆ ನಮ್ಮ  ಬ್ಯಾಂಕ್ ವತಿಯಿಂದ 50 ಹೆಚ್ಚು ಬಡ ಕುಟುಂಬಗಳಿಗೆ ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಬ್ಯಾಂಕ್ ಉಪಾಧ್ಯಕ್ಷೆ ಜಯಶ್ರೀ ತೆಗ್ಗಿನಮಠ, ನಿರ್ದೇಶಕರಾದ ನಿರ್ಮಲಾ ಅಗರವಾಲ, ಕವಿತಾ ದುಂಬಾಳಿ, ಪ್ರತಿಭಾ ಮಸಬಿನಾಳ, ಗಿರಿಜಾ ಪಾಟೀಲ, ನಜೀರ ಅವಟಿ, ಭರತ ಅಗರವಾಲ, ಶಿವಲಿಂಗಯ್ಯ ತೆಗ್ಗಿನಮಠ, ಸುನೀಲ ದುಂಬಾಳಿ, ಬಾಬು ಸಜ್ಜನ, ಸಂಗಮ್ಮ ಮದರಿ, ಮೇಘಾ ಹಿರೇಮಠ, ಶಿವಮ್ಮ ಅವಟಿ ಇದ್ದರು.

ಬ್ಯಾಂಕ್ ಮ್ಯಾನೇಜರ ಜಯಶ್ರೀ ಪೂಜಾರಿ ಸ್ವಾಗತಿಸಿದರು, ಮಿನಾಕ್ಷಿ ಬೆಣ್ಣೂರ ವಂದಿಸಿದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!