- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಂತ್ಯ ಸಂಸ್ಕಾರಕ್ಕೆ ಸಹಾಯಧನದ ಚಕ್ ವಿತರಣೆ

ಅಂತ್ಯ ಸಂಸ್ಕಾರಕ್ಕೆ ಸಹಾಯಧನದ ಚಕ್ ವಿತರಣೆ

ಬಸವನಬಾಗೇವಾಡಿ : ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರು ಆನಾರೋಗ್ಯದಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ವರ್ಗ-1ರಲ್ಲಿ ಪಜಾ, ಪಪಂ ದವರಿಗೆ ಮೀಸಲಿರಿಸಿದ ಅನುದಾನದಲ್ಲಿ ಅಂತ್ಯ (ಶವ) ಸಂಸ್ಕಾರಕ್ಕಾಗಿ 3ಸಾವಿರ ರೂ,ಗಳ ಸಹಾಯ ಧನದ ಚಕ್ ವಿತರಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಮಾರುತಿ ಬಂಡಿವಡ್ಡರ ಮಾತನಾಡಿ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದವರು ಮೃತಪಟ್ಟರೆ ಅತಂಹ ಕುಟುಂಬದ ಸದಸ್ಯರಿಗೆ ವರ್ಗ-1ರಲ್ಲಿ ಪಜಾ, ಪಪಂ ದವರಿಗೆ ಮೀಸಲಿರಿಸಿದ ಅನುದಾನದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ 3ಸಾವಿರ ರೂ,ಗಳು ಸಹಾಯ ಧನದ ರೂಪದಲ್ಲಿ ನೀಡಲಾಗುವುದು, ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ 6ಜನರು ಮೃತಪಟ್ಟಿದ್ದಾರೆ. ಅವರಲ್ಲಿ 3ಜನ ಮೃತಪಟ್ಟ ಕುಟುಂಬದ ಸದಸ್ಯರಿಗೆ ಚಕ್ ವಿತರಿಸಲಾಗಿದೆ, ಇನ್ನೂಳಿದ 3ಜನ ಮೃತಪಟ್ಟ ಕುಟುಂಬದ ಸದಸ್ಯರು ಯಾವುದೇ ದಾಖಲಾತಿ ಪತ್ರಗಳನ್ನು ನೀಡಿರುವುದಿಲ್ಲ, ಅತಂಹ ಸದಸ್ಯರು ಕೂಡಲೇ ದಾಖಲಾತಿ ಪತ್ರಗಳನ್ನು ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶಬನಮ ಲಾಲಸಾಬ ಪಾಂಡುಗೋಳ, ಗ್ರಾಪಂ ಸದಸ್ಯರಾದ ಜಯಶ್ರೀ ಕಲ್ಲನಗೌಡ ಪಾಟೀಲ ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!