- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇಗ್ನೋ ಪರೀಕ್ಷೆ ಪ್ರಾರಂಭ

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇಗ್ನೋ ಪರೀಕ್ಷೆ ಪ್ರಾರಂಭ

ವಿಜಯಪುರ : ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ಜೂನ್, 2021 ರ ಅಂತಿಮ ವರ್ಷ, ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಟರ್ಮ್ ಎಂಡ್ ಪರೀಕ್ಷೆಯನ್ನು 03 ನೇ ಅಗಸ್ಟ್ 2021 ರಿಂದ 9 ನೇ ಸೆಪ್ಟೆಂಬರ್ 2021 ರ ವರೆಗೆ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಎ ವರದರಾಜನ್ ಅವರು ತಿಳಿಸಿದ್ದಾರೆ.

ಭಾರತ ಸರ್ಕಾರದ ಸುರಕ್ಷತಾ ಸೂಚನಾನುಸಾರ ಸಾಮಾಜಿಕ ಅಂತರದೊಂದಿಗೆ ಪ್ರಾದೇಶಿಕ ಕೇಂದ್ರ ವಿಜಯಪುರ ಅಡಿಯಲ್ಲಿ 6 ಪರೀಕ್ಷಾ ಕೇಂದ್ರಗಳಾದ ವಿಜಯಪುರ, ಬಳ್ಳಾರಿ, ಕಲಬುರ್ಗಿ, ಬೆಳಗಾವಿ, ಧಾರವಾಡ ಮತ್ತು ಸೊಲ್ಲಾಪುರದ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಮಾಧ್ಯಮ ರತ್ನಕ್ಕೆ ಭಾವನಾ, ಮಾಧ್ಯಮ ಸಾಧಕರಾಗಿ ಸಂಗಮೇಶ ಚೂರಿ ಆಯ್ಕೆ

ಅರ್ಜಿ ಸಲ್ಲಿಸಿದವರು ಮತ್ತು ಪರೀಕ್ಷೆಗೆ ಹಾಜರಾಗಲು ಅರ್ಹರಿರುವ ವಿದ್ಯಾರ್ಥಿಗಳು ಅಂತಿಮ ವರ್ಷ ಸೆಮಿಸ್ಟರ್, ಮಾಸ್ಟರ್, ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳಿಗೆ ಹಾಲ್ ಟಿಕೆಟ್ (ಪ್ರವೇಶ ಪತ್ರ) ಇಗ್ನೋ ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!